Home

 
WELCOME TO THE OFFICIAL WEBSITE OF TP MOLAKALMURU
          

ಪಟ್ಟಣ ಪಂಚಾಯಿತಿಯು 1996 ರಂದು ಸ್ಥಾಪನೆಯಾಯಿತು, ಮೊಳಕಾಲ್ಮುರು ಪಟ್ಟಣವು ರಾಜ್ಯದ ಕೇಂದ್ರ ಸ್ಥಾನದಿಂದ (ರಾಜದಾನಿ) 250 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಸ್ಥಾನದಿಂದ 90 ಕಿ.ಮೀ ದೂರದಲ್ಲಿದ್ದು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕ್‌ ಮೊಳಕಾಲ್ಮುರು ಪಟ್ಟಣವು ಕರ್ನಾಟಕ ಆಂದ್ರಪ್ರದೇಶ ರಾಜ್ಯದ ಗಡಿ ಭಾಗದ ಪ್ರದೇಶವಾಗಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಪಟ್ಟಣಕ್ಕೆ ಈ ಪಟ್ಟಣವು 11 ಕಿ.ಮೀ ಅಂತರದಲ್ಲಿದೆ, ಪಟ್ಟಣಕ್ಕೆ ರಾಜ್ಯ ಹೆದ್ದಾರಿ 2 ಯಕ್ಕುಂಬಿ-ಮೊಳಕಾಲ್ಮುರು ಹೆದ್ದಾರಿಯು ಪಟ್ಟಣದ ಮುಖಾಂತರ ಹಾದೂ ಹೋಗಿದೆ, ರಾಜ್ಯ ಹೆದ್ದಾರಿ 19 ಬೀದರ್ -ಶ್ರೀರಂಗಪಟ್ಟಣ ಹೆದ್ದಾರಿಯು ಪಟ್ಟಣಕ್ಕೆ 5 ಕೀ.ಮಿ ಅಂತರದಲ್ಲಿದೆ, ಪ್ರಸ್ತುತ 2011 ಜನಗಣತಿಯ ಪ್ರಕಾರ 15,593 ಜನಸಂಖ್ಯೆಯನ್ನು ಹೊಂದಿದ್ದು, 3845 ಕುಟುಂಬಗಳಿವೆ, ಪಟ್ಟಣ ಪಂಚಾಯಿತಿಯು 15 ವಾರ್ಡಗಳನ್ನು ಹೊಂದಿದ್ದು, 15 ಜನ ಸದಸ್ಯರನ್ನು ಹೊಂದಿರುತ್ತದೆ, ಹಾಗೂ 3 ಜನ ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ಇಲ್ಲಿಯ ಜನರ ಪ್ರಮುಖ ಉದ್ಯೋಗ ವ್ಯವಸಾಯ, ನೇಕಾರ ವೃತ್ತಿ ( ಮಗ್ಗ ನೇಯುವುದು) ಪ್ರಮುಖ ಬೇಳೆ, ಶೆಂಗಾ, ಸೂರ್ಯಕಾಂತಿ, ಪಟ್ಟಣವು ರೇಷ್ಮೆ ಸೀರೆ ತಯಾರಿಕೆಯಲ್ಲಿ ರಾಜ್ಯದಲ್ಲಿಯೇ ಪ್ರಮುಖ ಸ್ಥಾನ ಪಡೆದುಕೊಂಡಿದೆ, ಮೊಳಕಾಲ್ಮುರು ತಾಲ್ಲೂಕ್‌ನಲ್ಲಿ ಸಾಮ್ರಾಟ್ ಅಶೋಕ್ ಚಕ್ರವರ್ತಿಯ ಶಿಲಾ ಶಾಸನ ದೂರೆತಿದ್ದು, ಅಶೋಕ ಸಿದ್ದಾಪುರದ ಬ್ರಹ್ಮಗಿರಿ ಬೆಟ್ಟದಲ್ಲಿರುವ ಶಾಸನ ಬ್ರಾಹ್ಮಿಲಿಪಿಯಲ್ಲಿರುತ್ತದೆ, ಶಾಸನವನ್ನು ಪುರಾತತ್ವ ಇಲಾಖೆಯಿಂದ ಸಂರಕ್ಷಿಸಡಲಾಗಿದೆ.

ದಿನಾಂಕ: 02-04-2012 ರಂದು 10:30 ಗಂಟೆ ಸಕಾಲ ಯೋಜನೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಮೀರಾನಾಜ್‌ ರವರು ಉದ್ಘಾಟಿಸಿದರು, ಈ ಯೋಜನೆಯಿಂದ ಸಾರ್ವಜನಿಕರು ಜನನ-ಮರಣ, ಖಾತಾ-ನಕಲು, ಉದ್ದಿಮೆ ಪರವಾನಿಗೆ, ಕಟ್ಟಡ ಪರವಾನಿಗೆ, ಹೊಸ ನಲ್ಲಿ ಸಂರ್ಪಕ ಸೇವೆಗಳನ್ನು ನಿಗದಿತ ಅವದಿಯೊಳಗೆ ಸೇವೆಯನ್ನು ಪಡೆಯಬಹುದು.

.ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯ ಪ್ರಮುಖ ಧ್ಯೇಯೋದ್ದೇಶಗಳು

·         ಮೊಳಕಾಲ್ಮುರು ಪಟ್ಟಣದ ನಾಗರೀಕರ ಮೂಲಭೂತ ಅವಶ್ಯಕತೆಗಳಾದ ಶುದ್ಧ ಕುಡಿಯುವ ನೀರು,ಬೀದಿ ದೀಪ ಹಾಗೂ ಪರಿಸರ ನೈರ್ಮಲ್ಯದ ಬಗ್ಗೆ ಪಟ್ಟಣ ಪಂಚಾಯಿತಿಯು ಪ್ರಮುಖ ಆದ್ಯತೆ ನೀಡಿರುತ್ತದೆ.

·         ಈ ನಿಟ್ಟಿನಲ್ಲಿ ಪಟ್ಟಣಕ್ಕೆ ರಂಗಯ್ಯನದುರ್ಗ ಜಲಾಶಯದಿಂದ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ.

·         ಪಟ್ಟಣದಲ್ಲಿ ದಿನ ನಿತ್ಯ ಸ್ವಚ್ಛತೆ ಕಾಪಾಡುವ ಸಲುವಾಗಿ ಪಟ್ಟಣದ ದೈನಂದಿನ ತ್ಯಾಜ್ಯವನ್ನು ಘನ ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ರವಾನಿಸಲಾಗುತ್ತಿದ್ದು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಮನೆ -ಮನೆಗಳಿಗೆ ಬೇಟಿ ನೀಡಿ ಕಸ ಸಂಗ್ರಹಿಸುವ ಕಾರ್ಯವನ್ನೂ ಸಹ ಮಾಡಲಾಗುತ್ತಿದೆ.ಸಾಂಕ್ರಾಮಿಕ ರೋಗಗಳು ಪಟ್ಟಣದಲ್ಲಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ವಾರ್ಡನಲ್ಲಿ ವಾರಕ್ಕೋಮ್ಮೆ ಪಟ್ಟಣದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ.

·         ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಫ್.ಸಿ.ಬಿ.ಆರ್.ಜಿ.ಎಪ್. ಸಿ.ಎಂ.ಎಸ್.ಎಂ.ಟಿ.ಡಿ.ಪಿ ಹಾಗೂ ಇನ್ನಿತರ ಯೋಜನೆಗಳಡಿಯಲ್ಲಿ ಪಟ್ಟಣದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳಾದ ರಸ್ತೆ , ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

·         ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ 22.75%,7.25%ಹಾಗೂ ಎಸ್.ಜೆ.ಎಸ್.ಆರ್.ವೈ ಇತ್ಯಾದಿ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗಗಳ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.

·         ಸಾರ್ವಜನಿಕ ಹಿತ ದೃಷ್ಟಿಯಿಂದ ಹಾಗೂ ಕಛೇರಿ ಕೆಲಸ ಕಾರ್ಯಗಳ ವ್ಯವಸ್ಥಿತ ನಿರ್ವಹಣೆಯ ಸದುದ್ದೇಶದಿಂದ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಕಛೇರಿ ಆಡಳಿತ ವ್ಯವಸ್ಥೆಯನ್ನು ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.

·         ಈ ನಿಟ್ಟಿನಲ್ಲಿ ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಪೌರಾಡಳಿತ ನಿರ್ದೇಶನಾಲಯ,ಪೌರ ಸುಧಾರಣಾ ಕೋಶ,ಬೆಂಗಳೂರುರವರ ಸಹಯೋಗದೊಂದಿಗೆ ಈಗಾಗಲೇ ಹಲವಾರು ಮಾಹಿತಿಗಳನ್ನು ಗಣಕೀಕರಣಗೊಳಿಸಲಾಗಿದ್ದು,ಪಟ್ಟಣದ ನಾಗರೀಕರು ತಮ್ಮ ಬೆರಳ ತುದಿಯಲ್ಲಿ ಅವಶ್ಯ ಮಾಹಿತಿ ಪಡೆಯಬಹುದಾದ ಸೌಲಭ್ಯ ಒದಗಿಸಲಾಗಿರುತ್ತದೆ.

ಕೆ.ಎಂ.ಆರ್.ಪಿ. ಗಣಕೀಕರಣ ಯೋಜನೆಯ ಕಿರು ಪರಿಚಯ:

ಪೌರಸುಧಾರಣಾ ಕೋಶದ ಮೇಲುಸ್ತುವಾರಿಯಲ್ಲಿ ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯಲ್ಲಿ ಹಲವಾರು ಗಣಕೀಕರಣ ಯೋಜನೆಗಳು ಪೂರ್ಣಗೊಂಡಿರುತ್ತವೆ ಹಾಗೂ ಇನ್ನು ಕೆಲ ಗಣಕೀಕರಣ ಯೋಜನೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಮುಕ್ತಾಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಲಭ್ಯವಾಗಲಿವೆ. ಈಗಾಗಲೇ ಬಹುತೇಕ ಮಾಹಿತಿಯನ್ನು ಕಛೇರಿ ವೆಬ್‌ ಸೈಟ್‌ನಲ್ಲಿ ಅಳವಡಿಸಲಾಗಿರುತ್ತದೆ.

  • ಕಛೇರಿ ವೆಬ್‌ಸೈಟ್: ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯು ತನ್ನದೇ ಆದ ವೆಬ್‌ಸೈಟ್ ಹೊಂದಿದ್ದು ಪಟ್ಟಣದ ಸಮಗ್ರ ಮಾಹಿತಿ ಇದರಲ್ಲಿ ಲಭ್ಯವಿರುತ್ತದೆ. ಕಛೇರಿಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಪೌರಸುಧಾರಣಾ ಕೋಶ ಈ ವೆಬ್ ಸೈಟ್ ಅಭಿವೃದ್ಧಿ ಪಡಿಸಿದ್ದು ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯಿಂದ ಈ ವೆಬ್ ಸೈಟ್ ನಿರ್ವಹಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿ, ಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಹತ್ತು ಹಲವು ಉಪಯುಕ್ತ ಮಾಹಿತಿ ಈ ವೆಬ್ ತಾಣದಲ್ಲಿ ಲಭ್ಯವಿರುತ್ತದೆ.ಪೌರ ಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ನಿರ್ವಹಿಸಲಾಗುತ್ತಿರುವ ಎಲ್ಲಾ ಆನ್‌ಲೈನ್ ಅಪ್ಲಿಕೇಷನ್‌ಗಳು ಈ ವೆಬ್ ತಾಣದಲ್ಲಿ ದೊರೆಯುವಂತಿದ್ದು ಪಟ್ಟಣದ ನಾಗರೀಕರು ಈ ತಾಣಕ್ಕೆ ಬೇಟಿ ನೀಡಿ ಅವಶ್ಯ ಮಾಹಿತಿ ಪಡೆಯಬಹುದಾಗಿರುತ್ತದೆ.
  • ಜನನ-ಮರಣ ದಾಖಲೆಗಳ ಆನ್ ಲೈನ್ ಅಪ್ಲಿಕೇಷನ್:1990ರಿಂದ ಇಲ್ಲಿಯವರೆಗಿನ ಪಟ್ಟಣದ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದ್ದು ಸಾರ್ವಜನಿಕರಿಗೆ ಗಣಕೀಕೃತ ಜನನ-ಮರಣ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ.
  • ಪಿ.ಜಿ.ಆರ್.ಆನ್ ಲೈನ್ ಅಪ್ಲಿಕೇಷನ್:ಪಟ್ಟಣದ ನಾಗರೀಕರ ದೈನಂದಿನ ಅವಶ್ಯಕತೆಗಳಾದ ಬೀದಿದೀಪ,ಕುಡಿಯುವ ನೀರು,ಸ್ವಚ್ಚತೆ ಇತ್ಯಾದಿ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಲಾಗಿರುತ್ತದೆ.ಈ ಕುಂದುಕೊರತೆ ಪರಿಹಾರ ಕೇಂದ್ರವು ಪ್ರತಿ ದಿನ ಮುಂಜಾನೆ 8.00ರಿಂದ ಸಂಜೆ 8.00ರ ವರಗೆ ಕಾರ್ಯ ನಿರ್ವಹಿಸುತ್ತದೆ.ಸಾರ್ವಜನಿಕರು ಕುಂದುಕೊರತೆ ಪರಿಹಾರ ಕೇಂದ್ರದ ಸಹಾಯ ವಾಣಿ:08198-299044ಕ್ಕೆ ಕರೆ ಮಾಡಿ ದೂರು ನೊಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೆ ತಮ್ಮ ದೂರಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಈ ಕಛೇರಿ ವೆಬ್ ತಾಣಕ್ಕೆ ಬೇಟಿ ನೀಡಿ ಪಿ.ಜಿ.ಆರ್. ಆನ್‌ಲೈನ್ ಅಪ್ಲಿಕೇಷನ್ ಮುಖಾಂತರವೂ ದೂರು ನೊಂದಾಯಿಸಬಹುದಾಗಿರುತ್ತದೆ.ಅಥವಾ ನೇರವಾಗಿ ಕುಂದು ಕೊರತೆ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿ ದೂರು ನೊಂದಾಯಿಸಬಹುದಾಗಿರುತ್ತದೆ.ದೂರು ಸ್ವೀಕರಿಸಿದ ನಂತರ ಕುಂದು ಕೊರತೆ ಪರಿಹಾರ ಕೇಂದ್ರದ ನಿರ್ವಾಹಕರು ಒಂದು " Unique Complaint Tracking Number " ನೀಡುವರು. ಇದರ ಸಹಾಯದಿಂದ ನಾಗರೀಕರು ತಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.ದೂರು ಪರಿಹಾರ ಕಾರ್ಯದ ಪ್ರತಿ ಹಂತದ ಸ್ಥಿತಿಯನ್ನು ಇ-ಮೇಲ್ ಮೂಲಕ ಸಹ ಇ-ಮೇಲ್ ವಿಳಾಸ ನೊಂದಾಯಿಸಿ ಪಡೆಯಬಹುದಾಗಿರುತ್ತದೆ.
  • ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಕಾರ್ಯ:ಪೌರ ಸುಧಾರಣಾ ಯೋಜನೆಯಡಿ ಮೊಳಕಾಲ್ಮುರು ಪಟ್ಟಣದಲ್ಲಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಟ್ಟಣದ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು,ಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ತೆರಿಗೆ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಮೊಳಕಾಲ್ಮುರುಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
  • ನಿಧಿ ಆಧಾರಿತ ಧ್ವಿ-ನಮೂದು ಸಂಚಯನ ಲೆಕ್ಕ ಪದ್ದತಿ: ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ದತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು, ಈ ಆನ್‌ಲೈನ್‌ ಅಪ್ಲೀಕೇಶನ್‌ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೇಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಕ್ಕಿಗರು ದಿನಂಪ್ರತಿ ಅಪ್‌‌ಡೇಟ್‌ ಮಾಡುತ್ತಿದ್ದು, ಕಛೇರಿಯ ಅಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್‌‌ ಅಪ್ಲೀಕೇಶನ್‌ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನು ಸಹ ಪಡೆಯಬಹುದಾಗಿದ್ದು, ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌‌ಸೈಟ್‌ ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
  • ಇತರೆ ಆನ್‌ಲೈನ್ ಅಪ್ಲಿಕೇಷನ್‌ಗಳು: ಸಿ.ಎಂ.ಎಸ್.ಎಂ.ಟಿ.ಡಿ.ಪಿ, ಆಶಾಕಿರಣ ಮಾಹಿತಿ, ಎಸ್.ಜೆ.ಎಸ್.ಆರ್.ವೈ, ಎಸ್.ಎಲ್.ಬಿ, ನಮ್ಮ ಮನೆ ಇತ್ಯಾದಿ ಪ್ರಮುಖ ಆನ್ ಲೈನ್ ಅಪ್ಲಿಕೇಷನ್ ಗಳನ್ನು ಪೌರಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಛೇರಿಯ ಸುಲಭ ನಿರ್ವಹಣೆಗೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಆನ್‌ಲೈನ್ ಅಪ್ಲಿಕೇಷನ್‌ಗಳ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.



 
ಈ ವೆಬ್‌ಪುಟದ ನಿರ್ವಾಹಕರು ಶ್ರೀ ಜಿ ಮೆಹಬೂಬ್ ಸಾಬ್, ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ಮೊಳಕಾಲ್ಮುರು, ತಿದ್ದುಪಡಿ ದಿನಾಂಕ:20/05/2013


 

No. Of Visitors :
Last Updated   : 20/05/2013  Release History
Release 2.0.0, Powered By Karnataka Municipal Data Society & maintained by Molakalmuru TP
This website can best viewed with the resolution 1024 * 768 using Internet Explorer 7.0 or above.
Valid CSS!